ಕಳೆದ ಇಪ್ಪತ್ತು ಮೂವತ್ತು ವರ್ಷಗಳಿಂದ ನಾನು ಮಿಥಿಕ್‌ ಸೊಸೈಟಿಯ ಗ್ರಂಥಾಲಯಕ್ಕೆ ಬಂದು ಅದರ ಸದುಪಯೋಗ ಮಾಡಿಕೊಳ್ಳುತ್ತಿದ್ದೇನೆ. ನಾನು ಕೇಳಿದ ಪುಸ್ತಕವನ್ನು ತಕ್ಷಣ ಒದಗಿಸುವ ವ್ಯವಸ್ಥೆ ಅತ್ಯಂತ ಸಮರ್ಪಕವಾಗಿದೆ. ಗ್ರಂಥಾಲಯ ಸಕಾಲಕ್ಕೆ ಆರಂಭವಾಗುತ್ತದೆ ಮತ್ತು ಯಾವಾಗ ಬಂದರು ಸಂಶೋಧನಾಸಕ್ತರು ಆಸಕ್ತಿ ಶ್ರದ್ಧೆಯಿಂದ ಗ್ರಂಥಾಧ್ಯಯನದಲ್ಲಿ ತೊಡಗಿರುತ್ತಾರೆ.

GET UPDATES ABOUT MYTHIC SOCIETY PROGRAMS ON EMAIL.

    Map
    Contact Us